ಸಾಂ ಲುವಿಸ್‌ ಕೊಲೆಜಿಂತ್‌ ʻಕೊಂಕ್ಣಿ ದಿರ್ವೆಂʼ ಸ್ಥಾಪಕ್‌ ಸರ್ದಾರ್‌ ಲುವಿಸ್‌ ಕಣ್ಣಪ್ಪ ವಿಶಿಂ ‘ಥ್ರು ಮೈ ವಿಂಡೊ’ ಕಾರ್ಯೆಂ

By

ಸಾಹಿತ್ಯ್ ಅಕಾದೆಮಿ ನ್ಯೂ ಡೆಲ್ಲಿ ಆನಿ ಕೊಂಕ್ಣಿ ಲೇಖಕ್ ಆನಿ ಕಲಾಕಾರ್ ಸಂಘ್, ಮಂಗ್ಳುರ್‌ ಹಾಂಚ್ಯಾ ಜೋಡ್‌ ಆಸ್ರ್ಯಾಖಾಲ್‌  ಸಪ್ಟೆಂಬರ್‌ ೨ವೆರ್ ಮಂಗ್ಳುರ್‌ ಸಾಂ ಲುವಿಸ್‌  ಕೊಲೆಜಿಚ್ಯಾ ಗೆಲ್ಗೆ ಹೊಲಾಂತ್ ‘ಥ್ರು ಮಾಯ್ ವಿಂಡೊ’ ನಾಂವಾಚೆಂ ಕಾರ್ಯೆಂ ಆಯೊಜಿತ್ ಕೆಲ್ಲೆಂ.  ʻಕೊಂಕ್ಣಿ ದಿರ್ವೆಂʼ ಸ್ಥಾಪಕ್‌ ಸರ್ದಾರ್‌ ಲುವಿಸ್‌ ಕಣ್ಣಪ್ಪ ಹಾಚ್ಯಾ ಜಿಣ್ಯೆಚೆರ್‌ ನದರ್‌ ಮಾರ್‌ʼಲ್ಲ್ಯಾ ಹ್ಯಾ ಕಾರ್ಯಾಕ್‌ ನಾಮ್ಣೆಚಿ ಲೆಖಿಕಾ, ಸರ್ದಾರ್‌ ಲುವಿಸ್‌ ಕಣ್ಣಪ್ಪಚ್ಯಾ ಭಾವಾಚಿ ನಾತ್ ಶ್ಯಾಮಲಾ ಮಾದವ್ ಮುಖೆಲ್ ಸಯ್ರಿ ಜಾವ್ನ್‌ ಹಾಜರ್ ಆಸ್‌ʼಲ್ಲಿ.  ಜಮ್ಲೆಲ್ಯಾ ಸರ್ಯ್ಯಾಂನಿ ಕಾರ್ಯಾಚ್ಯಾ ಸುರ್ವೆರ್‌ ಲುವಿಸ್‌ ಕಣ್ಣಪ್ಪಾಚ್ಯಾ ತಸ್ವಿರೆಕ್‌ ಫುಲಾಂಚೊ ಮಾನ್‌ ಭೆಟಯ್ಲೊ.  ಉಪ್ರಾಂತ್‌ ಶ್ಯಾಮಲಾ ಮಾದವ್ ಹಿಣೆ ಸರ್ದಾರ್ ಲುವಿಸ್ ಕಣ್ಣಪ್ಪಾ ಹಾಚ್ಯಾ ಜಿವಿತಾ ವಿಶಿಂ ಉಲವ್ಪ್‌ ದಿಲೆಂ. ತೆಂ ಉಲವ್ಪ್‌ ಆಸಾ ತಶೆಂ ಹಾಂಗಾಸರ್‌ ದಾಖಲ್‌ ಕೆಲಾಂ:

ಸಮಾಜಕ್ಕೆ ಬೆಳಕಾದ ವಿದ್ಯಾನಿಧಿ ಶೆವೆಲಿಯರ್‌ ಅಲೋಶಿಯಸ್‌ ಉಚ್ಚಿಲ್‌ ಕಣ್ಣಪ್ಪ.

ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಶೆವೆಲಿಯರ್‌ ಅಲೋಶಿಯಸ್‌ ಉಚ್ಚಿಲ್‌ ಕಣ್ಣಪ್ಪ ಅವರು ನಿಜ ಅಥದಲ್ಲಿ ವಿದ್ಯಾನಿಧಿ!

ಮಂಗಳೂರಿನ ವಿದ್ಯಾಕ್ಷೇತ್ರದಲ್ಲಿ ಹೆಸರಾಗಿ ಸಮಾಜದ ಉನ್ನತಿಗೆ ಪರಿಪರಿಯಲ್ಲಿ ಶ್ರಮಿಸಿದ ಪ್ರಾತಃಸ್ಮರಣೀಯರು. ಉಚ್ಚಿಲದ ಮನೆಯ ಮಗನಾಗಿ ನಮ್ಮ ಊರಿಗೆ ವಿದ್ಯೆಯ ಬೆಳಕನ್ನೀಯಲು ಜನಿಸಿ ಬಂದವರು.

1887 ಜುಲೈ 6 ಉಚ್ಚಿಲ್‌ ಕಣ್ಣಪ್ಪನವರ ಜನ್ಮ ದಿನ. ಸಂಬಂಧದಲ್ಲಿ ಅವರು ನಮ್ಮಮ್ಮನ ತಂದೆಯ ಅಣ್ಣ.ನಾನುಅವರತಮ್ಮನಮಗಳಮಗಳು.ಮೂರು ತಿಂಗಳ ಶೈಶವದಲ್ಲೇ ತಂದೆಯನ್ನು ಕಳಕೊಂಡ ನನ್ನ ಅಮ್ಮನಿಗೆ ಪ್ರೀತಿಯ ದೊಡ್ಡಪ್ಪ. ನಗರದ ಬೆಂದೂರಿನ ಇಗರ್ಜಿಗೆ ತಾಗಿಕೊಂಡಿರುವ ವಿಶಾಲ ಹಿತ್ತಿಲ ಮನೆ ʻಸೀಗೆಬಲ್ಲೆ ಹೌಸ್‌ʼ ಅವರು ಹುಟ್ಟಿ ಬೆಳೆದ ಮನೆ. ಅಲ್ಲಿ ವಾಸವಾಗಿದ್ದ ನಮ್ಮ ಮುತ್ತಜ್ಜ ಮಂಜಪ್ಪ, ಮಂಜಮ್ಮ ದಂಪತಿಗಳ ಒಂಬತ್ತು ಮಂದಿ ಮಕ್ಕಳ ದೊಡ್ಡ ಕುಟುಂಬದಲ್ಲಿ ಹುಟ್ಟಿ ಬಂದವರು. ಈ ದೊಡ್ಡ ಕುಟುಂಬವಲ್ಲದೆ, ಶಾಲೆಯಿರದ ನಮ್ಮೂರು ಉಚ್ಚಿಲದಿಂದ ವಿದ್ಯಾಕಾಂಕ್ಷಿ ಬಂಧುಗಳು ಅನೇಕರು ಬಂದು ಸೇರಿದ್ದ ಉಪ್ಪರಿಗೆ ಮನೆಯದು.

ನಮ್ಮ ಮುತ್ತಜ್ಜ ತಮ್ಮ ಏಳು ಗಂಡು ಮಕ್ಕಳನ್ನು ಪದವೀಧರರನ್ನಾಗಿಯೂ, ಅವರಲ್ಲಿ ಕೊನೆಯ ಮೂವರನ್ನು ಸ್ನಾತಕೋತ್ತರ ಪದವೀಧರರನ್ನಾಗಿಯೂ ಮಾಡುವಲ್ಲಿ ಸಫಲರಾಗಿದ್ದರು. ಸ್ವತಃ ಫೋರ್ತ್‌ ಫಾರ್ಮ್‌ವರೆಗೆ ಕಲಿತಿದ್ದ ಅವರು, ಮಂಗಳೂರಿನ ನ್ಯಾಯಾಲಯದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿನ ಬ್ರಿಟಿಶ್‌ ನ್ಯಾಯಧೀಶರ ಪ್ರಭಾವದಿಂದ ವಿದ್ಯೆಯ ಮಹತ್ವವರಿತು ತಮ್ಮೆಲ್ಲ ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸದ ಅವಕಾಶವಿತ್ತರು. ಅವರ ಇಬ್ಬರು ಹೆಣ್ಣು ಮಕ್ಕಳೂ ಸಮಗ್ರ ರಾಮಾಯಣ್‌, ಮಹಾಭಾರತ ವಾಚನಗೈಯುವಲ್ಲಿ ಸಮರ್ಥರಿದ್ದರು. ಆ ಕಾಲಕ್ಕೇ ಅವರು ಲೈಟ್‌ ಹೌಸ್‌ ಹಿಲ್‌ನಲ್ಲಿರುವ ಲೇಡೀಸ್‌ ಕ್ಲಬ್‌ನ ಸದಸ್ಯೆಯರೂ ಆಗಿದ್ದರು.

ನಮ್ಮೂರ ಉಚ್ಚಿಲದ ನಾಡಿಗೆ ವಿದ್ಯೆಯ ಬೆಳಕನ್ನಿತ್ತ ಮನೆ- ಅಂದೆ. ನಿಜ; 1914 ರಿಂದ 1918– ಪ್ರಥಮ ಜಾಗತಿಕ ಮಹಾಯುದ್ಧದ ದಳ್ಳುರಿಯ ಬೇಗೆಗೆ ಜನತೆ ಕಂಗೆಟ್ಟು ದಿಕ್ಕು ಕಾಣದಂತಾಗಿದ್ದ ದಿನಗಳವು. ನಾಡಿನ ಜನರು ದಾರಿದ್ರ್ಯದ ಸಂಕಷ್ಟದಿಂದ ಬಸವಳಿದಿದ್ದರು. ಹೊಟ್ಟೆಯ ಪಾಡಿಗಾಗಿ ಕೆಲಸವನ್ನರಸಿ ಬೊಂಬಾಯಿ ತಲುಪಿ, ಅಲ್ಲಿ ನೆಲಸಿದ್ದ ತಮ್ಮ ಪುರುಷರಿಂದ ಅಪರೂಪಕ್ಕೆ ಬರುತ್ತಿದ್ದ ಪತ್ತಗಳನ್ನು ಓದಿ ತಿಳಿಯ ತಕ್ಕ ಅಕ್ಷರ ಜ್ಞಾನವೂ ಇರದ ಹೆಂಗಸರು, ಮಕ್ಕಳು! ಇಂಥ ಜನರ ಸಂಕಷ್ಟಕ್ಕೆ ನೊಂದು, ವಿದ್ಯೆಯೊಂದೇ ಅವರನ್ನು ಈ ದಾರಿದ್ರ್ಯದ ಕೂಪದಿಂದ ಮೇಲತ್ತಬಲ್ಲ ಸಾಧನ ಎಂದು ಮನಗಂಡು, ಆ ದಿಸೆಯಲ್ಲಿ ಕಾಯ ಪ್ರವೃತ್ತರಾದವರು, ನಮ್ಮ ಮುತ್ತಜ್ಜ ಉಚ್ಚಿಲ ಮಂಜಪ್ಪ ಅವರು.

ಊರ ಜನರಿಗೆ ವಿದ್ಯೆಯನ್ನೀವ ಸಂಕಲ್ಪದಿಂದ ಉಚ್ಚಿಲದ ಕೋಟೆಯ ಬಳಿಯ ಬಸ್ತಿ ಪಡ್ಪು ಎಂಬಲ್ಲಿ ತಮ್ಮದಾಗಿದ್ದ ಕುಟುಂಬದ ಮನೆಯನ್ನು ಶಾಲೆ ನಡೆಸಲೆಂದು ಒದಗಿಸಿ ಕೊಟ್ಟರು. ವಿದ್ಯಾದಾನದ ಹಾದಿಯಲ್ಲಿ ಅವರಿಗೆ ಹೆಗಲೆಣೆಯಾಗಿ ನಿಂತವರು ಉದ್ಯಾವರ ಬೀಚ ಬೆಳ್ಚಪ್ಪಾಡರೆಂಬ ಹಿರಿಯರು. ಮುಂದೆ ಮಕ್ಕಳ ಸಂಖ್ಯೆ ಹೆಚ್ಚಿಕೊಂಡು ಶಾಲೆಗೆ ಸ್ಥಳ ಸಾಲದಾದಾಗ, ಅಂದಿನ ನೀಲೇಶ್ವರ ದಾಮೋದರ ತಂತ್ರಿಯವರಿಂದ ಊರ ನಡುಮಧ್ಯ ಶಾಲೆಗಾಗಿ ಸ್ಥಳವನ್ನು ದಾನವಾಗಿ ಪಡೆದು ಅಲ್ಲಿ ಶಾಲಾ ಕಟ್ಟಡವನ್ನು ಸ್ಥಾಪಿಸಲಾಯ್ತು. ಉದಾರಿಗಳ ದೇಣಿಗೆಯಿಂದ, ಬೊಂಬಾಯಿಯಲ್ಲಿ ನೆಲಸಿದ ಊರವರು ಸಂಗ್ರಹಿಸಿ ಇತ್ತ ಧನಸಹಾಯದಿಂದ, ಊರವರ ಶ್ರಮದಾನದಿಂದ ಕಟ್ಟಿ ನಿಲ್ಲಿಸಿದ ಶಾಲೆಯ ಸ್ಥಾಪನೆಯನ್ನು ಸಾಧ್ಯವಾಗಿಸಿದವರು ತಂದೆ ಮಂಜಪ್ಪ ಅವರ ಹಾದಿಯಲ್ಲಿ ಸಡೆದ ಅವರ ಏಳು ಜನ ಸುಪುತ್ರರು.

ಆ ಹಿರಿಯರು ಸ್ಥಾಪಿಸಿದ ಮಾದರಿ ಪಾಠಶಾಲಾ ಕಟ್ಟಡ ಹೊಂದಿದ ಈ ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶತಮಾನೋತ್ಸವವು 2019ರ ನವೆಂಬರ್‌ ತಿಂಗಳಲ್ಲಿ ಮೂರುದಿನಗಳ ಸ್ಮರಣೀಯ ಸಂಭ್ರಮವಾಗಿ ನೆರವೇರಿದ ಧನ್ಯತೆ ನಮ್ಮೆಲ್ಲರದು.

ಮುತ್ತಜ್ಜನ ಮಕ್ಕಳಲ್ಲಿ ದೇವಮ್ಮ, ಪೊನ್ನಮ್ಮ, ಅವರು ಹೆಣ್ಣುಮಕ್ಕಳಾದರೆ, ಬಸಪ್ಪ, ಗುಡ್ಡಪ್ಪ, ಪರಮೇಶ್ವರ, ವೀರಪ್ಪ, ರಾಮಪ್ಪ, ಕಣ್ಣಪ್ಪ ಮತ್ತು ಕೃಷ್ಣಪ್ಪ ಗಂಡುಮಕ್ಕಳು. ಕೊನೆಯವರಾದ ಕೃಷ್ಣಪ್ಪ ನಮ್ಮಮ್ಮನ ತಂದೆ.

ಸ್ವಾರಸ್ಯವೆಂದರೆ ಮೊದಲು ಕೃಷ್ಣಪ್ಪನೆಂದೇ ನಾಮಕರಣವಾಗಿದ್ದ ಮೊದಲಿಗೆ ಬಂದ ಅಣ್ಣ ತುಂಬ ಬೆಳ್ಳಗೆ ಕೆಂಪುಕೆಂಪಾಗಿದ್ದರೆ, ನಂತರ ಬಂದ ತಮ್ಮ ಕೃಷ್ಣನಂತೆ ಶ್ಯಾಮಲ ವರ್ಣ ಹೊಂದಿದ್ದರು. ಹಾಗಾಗಿ ಅವರ ಹೆಸರುಗಳನ್ನು ಬದಲಾಯಿಸಿ ಅಣ್ಣ ಕಣ್ಣಪ್ಪನಾದರೆ ತಮ್ಮ ಕೃಷ್ಣಪ್ಪನಾದರು.

ಈ ಏಳು ಗಂಡು ಮಕ್ಕಳಲ್ಲಿ ಮೂವರು ಮುಂದೆ ಕ್ರಿಸ್ತಾನುಯಾಯಿಗಾಳಾಗಿ ಪರಿವರ್ತಿತರಾದರು ಎಂದು ನಾನಂದರೆ ಆಲಿಸುತ್ತಿರುವ ನಿಮಗೆಲ್ಲ ಆಶ್ಚರ್ಯ ಅನಿಸುವುದೇ? ಖಂಡಿತ ಅನಿಸದಿರದು.

ಅಜ್ಜ ಕಣ್ಣಪ್ಪನವರ ಬಗೆಗೆ ಹೇಳುವಾಗ ಅವರು ಹುಟ್ಟಿ ಬೆಳೆದ ಮನೆ ಹಾಗೂ ಅವರ ಈ ಎಲ್ಲ ಸೋದರರ ಬಗೆಗೂ ಸ್ಥೂಲ ಪರಿಚಯ ಅಗತ್ಯ ಅನಿಸುತ್ತದೆ. ಬೆಂದೂರ್‌ ಚರ್ಚ್ʼಗೆ ತಾಗಿಕಂಡಿರುವ ʼಸೀಗೆಬಲ್ಲೆ ಹೌಸ್‌ʼ ಅವರು ಬೆಳೆದ ಮನೆ. ಸೀಗೆಯ ಬಲ್ಲೆಗಳೂ, ಮಾವು, ಹಲಸು, ಚಕ್ಕೋತ್ತಾ, ಚಿಕ್ಕು, ಸೀತಾಫಲ ಮುಂತಾದ ಹಣ್ಣಿನ ಮರಗಳೂ ತುಂಬಿದ ವಿಶಾಲ ಹಿತ್ತಿಲ ತಂಪಿನ ವಾತಾವರಣವದು. ಗೋಡೆ ಹಾರಿದರೆ ಬೆಂದೂರ್‌ ಚರ್ಚ್‌ ಮತ್ತು ಸೈಂಟ್‌ ಸೆಬಾಸ್ಟಿಯನ್‌ ಶಾಲೆ. ಈ ಮಕ್ಕಳೆಲ್ಲ ಬೆಳೆದು, ಕೂಡುಕುಟುಂಬ ವಿಘಟಿತವಾಗಿ ಹೊಸ ಜನರೇಶನ್‌ ರೂಪುಗೊಂಡಂತೆ ಆ ಬೆಲ್ಯೆಪರ – ಅರ್ಥಾತ್ ದೊಡ್ಡಮನೆ – ಎಂದೇ ಕರೆಸಿಕೊಂಡಿದ್ದ ಆ ಮನೆಯಿದ್ದ ಸ್ಥಳದಲ್ಲೀಗ ಹಲವು ಮನೆಗಳು ಎದ್ದು ನಿಂತಿವೆ.

ಕಣ್ಣಪ್ಪ ಅವರ ಹಿರಿಯ ಸಹೋದರ ಬಸಪ್ಪ ಪದವೀಧರರಾಗಿ ಆಹಾರ ಸರಬರಾಜು ಇಲಾಖೆಯಲ್ಲಿ ಸರಕಾರಿ ನೌಕರಿಯಲ್ಲಿದ್ದರು. ತಮ್ಮ ತಂದೆಯ ಬಳಿಕ ಉಚ್ಚಿಲ ಬೋವಿ ಶಾಲೆಗಾಗಿ ತನುಮನದಿಂದ ದುಡಿದ ಅವರಿಗೆ ಮಕ್ಕಳಿರಲಿಲ್ಲ.

ಎರಡನೆಯವರು ಅಣ್ಣ ಗುಡ್ಡಪ್ಪ. ಮನೆ ಪಕ್ಕದ ಬೆಂದೂರ್‌ ಚರ್ಚ್‌ ಮತ್ತು ಸ್ಕೂಲ್‌ ಹಾಗೂ ಅಲೋಶಿಯಸ್‌ ಕಾಲೇಜ್‌ ಈ ಮಕ್ಕಳ ಮೇಲೆ ಬೀರಿದ ಪ್ರಭಾವ ಅಪಾರವೆನ್ನಬೇಕು. ಚರ್ಚ್‌ʼಗೆ ಸದಾ ಭೇಟಿಯೀಯುತ್ತಿದ್ದ ಅಣ್ಣ ಗುಡ್ಡಪ್ಪ ಕ್ರೈಸ್ತ ಮತದಿಂದ ಪ್ರಭಾವಿತರಾಗಿ ಮತಾಂತರಗೊಂಡು ಕ್ರೈಸ್ತರಾಗಿ, ಮುಂದೆ ಪಾದ್ರಿಯಾಗಿ ಜೆಪ್ಪು ಸೆಮಿನರಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಅಲ್ಲೇ ಕ್ರೈಸ್ತೈಕ್ಯರಾದರು. ಬಡರೋಗಿಗಳಿಗೆ ತಮ್ಮದೇ ಸಂಪಾದನೆಯಿಂದ ಮಲೇರಿಯಾ ಗುಳಿಗೆಗಳನ್ನು, ಇತರ ಔಷಧಿಗಳನ್ನು ಒದಗಿಸಿ ಬಡವರ ಸೇವೆಯಲ್ಲಿ ಬರಿಗೈಯಾದವರು.

ಮೂರನೆಯವರಾದ ಪರಮೇಶ್ವರರು ಎಕ್ಸೈಸ್‌ ಇನ್‌ಸ್ಪೆಕ್ಟರ್‌ ಆಗಿದ್ದು, ಬೆಂದೂರ್‌ವೆಲ್‌ ಬಳಿಯ ತಮ್ಮ ನಿವಾಸ ʼತುಳಸೀ ವಿಲಾಸʼದಲ್ಲಿ ಬಹಳ ವೈಭವದಿಂದ ಬಾಳಿದವರು. ಗಾಂಜಾಂ ಇನ್‌ಸ್ಪೆಕ್ಟರ್‌ ಎಂದೂ ಕರೆಯಲ್ಪಡುತ್ತಿದ್ದು, ಕುದುರೆ ಸಾರೋಟಿನಲ್ಲಿ ಬಿಚ್ಚುಗತ್ತಿ ಭಟರೊಡನೆ ಕಂದಾಯ ವಸೂಲಿಗೆ ಹೋಗುತ್ತಿದ್ದ ಅವರ ವೈಭವದ ದಿನಗಳ ಬಗ್ಗೆ ನಮ್ಮ ಹಿರಿಯರಿಂದ ಕೇಳಿದ್ದೇವೆ. ಮೆಡಿಕಲ್‌, ಇಂಜಿನಿಯರಿಂಗ್‌, ವಕೀಲ ಕಲಿಯುತ್ತಿದ್ದ ಮೇಧಾವಿ ಗಂಡುಮಕ್ಕಳು, ಸ್ನಾತಕೋತ್ತರ ಪದವೀಧರರಾದ ಹೆಣ್ಣುಮಕ್ಕಳು. ಈ ಮಕ್ಕಳ ಬಗ್ಗೆ ʼಬಾರ್ನ್‌ ವಿತ್‌ ಅ ಸಿಲ್ವರ್‌ ಸ್ಪೂನ್‌ʼ, ಎಂದು ಜನರು ಆಡಿಕೊಳ್ಳುತ್ತಿದ್ದಂತಹ ಸಿರಿಸಂಪತ್ತು ತುಂಬಿದ ಮನೆ. ಆದರೆ ಅದೆಲ್ಲವೂ ನಶಿಸಿ ಹೋಗುವಂತೆ ಒಂದರ ಹಿಂದೊಂದು ಸಂಭವಿಸಿದ ಮೇಧಾವಿ ಮಕ್ಕಳ ಆಕಸ್ಮಿಕ ಮರಣಗಳು ಅವರಲ್ಲಿ ವೈರಾಗ್ಯವನ್ನು ತಂದಿಟ್ಟು, ಹೆಚ್ಚಿನ ಸಮಯವನ್ನು ಅವರು ಇಗರ್ಜಿಯಲ್ಲಿ ಪ್ರಾರ್ಥನೆಯಲ್ಲಿ ಕಳೆಯಲಾರಂಭಿಸಿದರು, ಹಾಗೂ ಮತಾಂತರಗೊಂಡು ಕ್ರೈಸ್ತರಾದರು. ಆದರೆ ನಿತ್ಯವೂ ನಿಷ್ಠೆಯಿಂದ ತುಳಸೀ ಪೂಜೆ ಮಾಡುತ್ತಿದ್ದ ತನ್ನ ಪತ್ನಿ ತುಳಸಿಯನ್ನು ಮಾತ್ರ ತಮ್ಮ ಹಾದಿಯಲ್ಲಿ ಒಯ್ಯುವಲ್ಲಿ ಅವರು ಸಫಲರಾಗಲಿಲ್ಲ.

ʻತುಳಸೀ ವಿಲಾಸʼವೂ ಕೂಡಾ ವಿದ್ಯಾಕಾಂಕ್ಷಿಗಳಾಗಿ ನಮ್ಮೂರು ಉಚ್ಚಿಲದಿಂದ ಬಂದು ಆಶ್ರಯ ಪಡೆದ ಜನರಿಂದ ತುಂಬಿ ತುಳುಕುತ್ತಿತ್ತು. ಒಟ್ಟು ಇಪ್ಪತ್ತೈದು ಜನರಿದ್ದ ಮನೆಯಲ್ಲಿ ಮನೆಯೊಡತಿ ತುಳಸಿ, ಎಲ್ಲ ಇಪ್ಪತ್ತೈದು ಬಟ್ಟಲುಗಳಿಗೂ ಒಂದೇ ಪ್ರಮಾಣದಲ್ಲಿ ಬಡಿಸುತ್ತಿದ್ದ ಕೌತುಕವನ್ನು ಅಲ್ಲೇ ನೆಲಸಿದ್ದ ನಮ್ಮಮ್ಮ, ನಮ್ಮ ಚಿಕ್ಕಪ್ಪ ಬಣ್ಣಿಸುತ್ತಿದ್ದುದನ್ನು ಕೇಳಿದ್ದೇವೆ. ಮನೆಯೊಡತಿ ನಮ್ಮ ತಂದೆಯ ಸೋದರತ್ತೆ ಆದ್ದರಿಂದ, ನಮ್ಮ ಚಿಕ್ಕಪ್ಪನೂ ವಿದ್ಯೆಗಾಗಿ ಬಂದು ಅಲ್ಲಿದ್ದರು. ಶೈಶವದಲ್ಲೇ ತಂದೆಯನ್ನು ಕಳಕೊಂಡ ನಮ್ಮಮ್ಮ ತನ್ನ ಮೊದಲ ಆರು ವರ್ಷಗಳನ್ನು ಸೋದರತ್ತಯ ಬಳಿ ಸೀಗೆಬಲ್ಲೆ ಹೌಸ್‌ನಲ್ಲೂ, ಮುಂದಿನ ಆರು ವರ್ಷ ತುಳಸೀ ವಿಲಾಸದಲ್ಲೂ, ನಂತರದ ಆರು ವರ್ಷ ಮಾಧವ ವಿಲಾಸ – ಸಣ್ಣ ಸೋದರತ್ತೆಯ ಮನೆಯಲ್ಲೂ ಕಳೆದರು.

ತುಳಸೀ ವಿಲಾಸದ ಅಳಿದುಳಿದ ಮಕ್ಕಳಲ್ಲಿ ಅಪ್ರತಿಮ ಮೇಧಾವಿ ಇಂಜಿನಿಯರ್‌ ಆಗಿದ್ದ ನಮ್ಮ ನಾರಾಯಣ ಅಂಕ್‌ಲ್‌ ತಮ್ಮ ಕ್ಷೇತ್ರದಲ್ಲಿ ಹೆಸರಾದವರು. ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದಿದ್ದ ಪ್ರತಿಭಾವಂತರು. ನೇತ್ರಾವತಿ ನದಿ ಸೇತುವೆ ನಿರ್ಮಾಣದಲ್ಲಿ ಅಡಚಣೆ ಬಂದು, ಸೇತುವೆ ನಿಲ್ಲದಾದಾಗ, ಅಸೌಖ್ಯದಿಂದಿದ್ದ ಅವರನ್ನು ಕರೆದೊಯ್ದು ಅವರ ಮಾರ್ಗದರ್ಶನ ಪಡೆಯಲಾಗಿತ್ತು. ಕನ್ನಂಬಾಡಿ ಕಟ್ಟೆಯ ನಿರ್ಮಾಣದಲ್ಲಿ ಅವರು ಸರ್‌ ವಿಶ್ವೇಶ್ವರಯ್ಯ ಅವರ ಸಹವರ್ತೀಯಾಗಿದ್ದರು. ಮಂಗಳೂರಿನಲ್ಲಿ ಪ್ರಥಮ ಮೋಟರ್‌ ಬೈಕ್‌ ಹೊಂದಿದ್ದವರು. ಹ್ಯಾಟ್‌, ಬೂಟ್‌ ಧರಿಸಿ, ವಾಕಿಂಗ್‌ ಸ್ಟಿಕ್‌ ಹಿಡಿದು ನಡೆದು ಬರುತ್ತಿದ್ದ ಅವರು ನಮ್ಮ ಹ್ಯಾಟು ಬೂಟು ಮಾಮನಾಗಿದ್ದರು.

ಅವರ ಸೋದರಿ ನಮ್ಮ ಆಂಟಿ ಲಕ್ಷ್ಮೀ ಮದರಾಸ್‌ ಯೂನಿವರ್ಸಿಟಿಯಿಂದ ಇಂಗ್ಲಿಷ್‌ ಎಂ.ಎ.ಯಲ್ಲಿ ಗೋಲ್ಡ್‌ ಮೆಡಲ್‌ ಪಡೆದವರು. ಬೆಳ್ಳನೆ ನೀಳದೇಹದ, ಅರಿಸ್ಟೊಕ್ರಾಟಿಕ್‌ ಚಹರೆಯ ಆಂಟಿ ಸೌಮ್ಯ ನಡೆನುಡಿ ಹೊಂದಿದ್ದರು. ಪ್ರೀತಿಹರಿಸಿ ಆಶೀರ್ವದಿಸುವ ಅವರ ಪತ್ರಗಳು ನನ್ನ ಪತ್ರ ಸಂಪತ್ತಿನಲ್ಲಿ ಒಂದಾಗಿವೆ.

ಇನ್ನೋರ್ವ ಸೋದರಿ ಆಂಟಿ ಯಶೋದಾ ಸೈಂಟ್‌ ಆಗ್ನೇಸ್‌ ಕಾಲೇಜಿನಲ್ಲಿ ಫ್ರೆಂಚ್‌ ಲೆಕ್ಚರರ್‌ ಆಗಿದ್ದವರು. ಜ್ಯೋತಿ ಸರ್ಕ್‌ಲ್‌ ಮೇಲಿನ ಮಂಗಳೂರು ಮಹಿಳಾ ಸಮಾಜ ಕಛೇರಿಯಲ್ಲಿ ಅವರೊಬ್ಬ ಪ್ರಾಮಿನೆಂಟ್‌ ಫಿಗರ್.‌ ನಮಗೆ ಬುದ್ಧಿ ತಿಳಿವ ಕಾಲಕ್ಕೆ ತುಳಸೀ ವಿಲಾಸದಲ್ಲಿ ವಾಸಿಸುತ್ತಿದ್ದವರು, ಯಶೋದಾಂಟಿ ಮತ್ತು ಅವರ ಪಂಚ ಪಾಂಡವರೆಂದು ಕರೆಸಿಕೊಳ್ಳುತಿದ್ದ ಐವರು ಗಂಡು ಮಕ್ಕಳು ತಾಯ್ತಂದೆಯರಂತೆಯೇ ಎತ್ತರ ಧೃಢಕಾಯರಾಗಿದ್ದು ಒಬ್ಬೋಬ್ಬರಾಗಿ ಕಾಲಗರ್ಭದಲ್ಲಿ ಸೇರಿಹೋಗಿ ಅವರಲ್ಲೊಬ್ಬರೂ ಇಂದು ಉಳಿದಿಲ್ಲ.

ತುಳಸೀ ವಿಲಾಸದ ಪಕ್ಕದಲ್ಲೇ ಅಜ್ಜ ಕಣ್ಣಪ್ಪ ಅವರ ಇನ್ನೋರ್ವ ಸೋದರ ವೀರಪ್ಪ ಅವರ ನಿವಾಸ-ʼಲೇನ್‌ ಕಾಟೇಜ್‌ʼ. ಪೊಲೀಸ್‌ ಇನ್ಸ್‌ʼಪೆಕ್ಟರ್‌ ಆಗಿದ್ದ ಅವರು, ನೀಲೇಶ್ವರ ದಾಮೋದರ ತಂತ್ರಿ ಅವರಿಂದ ಉಚ್ಚಿಲ ಬೋವಿ ಶಾಲೆಗಾಗಿ ನಿವೇಶನವನ್ನು ಬೇಡಿ ದಾನವಾಗಿ ಪಡೆದವರು. ವೀರಪ್ಪ ಅವರ ಹತ್ತು ಮಕ್ಕಳ ದೊಡ್ಡ ಕುಟುಂಬ ನೆಲಸಿದ್ದ ವಿಶಾಲ ಹಿತ್ತಿಲ ಮನೆಯೇಲೇನ್‌ ಕಾಟೇಜ್.‌ ನಗರದ ಶ್ರೇಷ್ಟ ವೈದ್ಯರಲ್ಲೊಬ್ಬರಾಗಿದ್ದ ಡಾ. ರಾಧಾಕೃಷ್ಣ ಅವರ ಮಕ್ಕಳಲ್ಲೊಬ್ಬರು. ಹಂಟಿಂಗ್‌ ಹೋಗುತ್ತಿದ್ದ ಅವರ ಶೂಟಿಂಗ್ ಪರಿಣತಿಯ ಸಾಕ್ಷ್ಯಗಳೆಲ್ಲ ಲೇನ್‌ಕಾಟೇಜ್‌ ವರಾಂಡಾದ ಗೋಡೆಯನ್ನು ಅಲಂಕರಿಸಿದ್ದವು.  ಲೇನ್‌ಕಾಟೇಜ್‌ ಪಕ್ಕದಲ್ಲೇ ಓಣಿಯಾಚೆಗೆ ನಮ್ಮ ಇಂಜಿನಿಯರ್‌ ಅಂಕಲ್‌ ನಿವಾಸ- ʼಪುಷ್ಪ ವಿಹಾರʼ. ತುಳಸೀ ವಿಲಾಸದಂತೆಯೇ ಪುಷ್ಪ ವಿಹಾರವೂ ಇಂದು ಅಸ್ತಿತ್ವದಲ್ಲಿರದೆ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ.

ಕಣ್ಣಪ್ಪ ಅವರ ಹಿರಿಯ ಸೋದರಿ ದೇವಮ್ಮ ಸೀಗೆಬಲ್ಲೆ ಹೌಸ್‌ನ ಒಡತಿಯಾಗಿದ್ದರೆ, ಕಿರಿಯ ಸೋದರಿ ಪೊನ್ನಮ್ಮರವರ ಮನೆ ʼಮಾಧವ ವಿಲಾಸʼ ಬೆಂದೂರ್‌ನಲ್ಲಿ, ಈಗಿನ ಎಸ್.ಸಿ.ಎಸ್.‌ ಹಾಸ್ಪಿಟಲ್‌ ಪಕ್ಕದಲ್ಲಿತ್ತು. ಊರಿನಿಂದ ಬಂದ ವಿದ್ಯಾಕಾಂಕ್ಷಿಗಳಿಗೆ ಅದೂ ಆಶ್ರಯ ತಾಣವಾಗಿತ್ತು. ಇಂದು ಮಾಧವ ವಿಲಾಸವೂ ಅಳಿದು ನೆನಪು ಮಾತ್ರವಾಗಿದೆ.

ರಾವ್‌ ಬಹದ್ದೂರ್‌ ಬಿರುದಾಂಕಿತ ಯು. ರಾಮಪ್ಪ, ಉಚ್ಚಿಲ್‌ ಕಣ್ಣಪ್ಪ ಅವರ ಇನ್ನೋರ್ವ ಸೋದರ ಮದರಾಸಿನ ಸೆಶ್ಯನ್ಸ್ ಕೋರ್ಟ್‌ ಜಡ್ಜ್‌ ಆಗಿದ್ದು, ನಮ್ಮೂರ ಶಾಲೆ ಹಾಗೂ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದವರು. ಸೇಲಂ, ಊಟಿ, ಏರ್‌ಕಾಡ್‌ಗಳಲ್ಲಿ ವೃತ್ತಿನಿರತರಾಗಿದ್ದಾಗ ಅಲ್ಲಿ ಕಾಫಿ, ಏಲಕ್ಕಿ, ಫಲಪುಷ್ಪ ಭರಿತ ವಿಶಾಲ ಎಸ್ಟೇಟ್‌ಗಳನ್ನು ಹೊಂದಿದ್ದವರು. ಸಮಾಜಸೇವಾ ನಿರತರು. ತಮ್ಮ ಸೇವೆಗೆ ಮನ್ನಣೆಯಾಗಿ ಅಂದಿನ ಬ್ರಿಟಿಶ್‌ ವೈಸರಾಯ್‌ ಅವರಿಂದ ʻರಾವ್‌ ಬಹದ್ದೂರ್‌ʼ ಬಿರುದಾಂಕಿತರಾದವರು. ಅವರ ಶಿಸ್ತಿನ ಜೀವನದ ಬಗ್ಗೆ ಅವರ ಮೊಮ್ಮೊಕ್ಕಳು ಸ್ಮರಿಸುತ್ತಾರೆ. ಕಛೇರಿ ಕೆಲಸಕ್ಕೆ ಹೊರತು ವಯಕ್ತಿಕ ಕೆಲಸಕ್ಕೆ ಸರಕಾರಿ ವಾಹನವನ್ನು ಉಪಯೋಗಿಸದೆ ಸೈಕಲ್‌ನಲ್ಲೇ ಸಂಚಾರ, ನಿಷ್ಠಾವಂತ.  25 ಜನರಿದ್ದ ಬಂಗಲೆ, ಪುಷ್ಕಳ ಊಟ, ಆದರೆ ಮುಸ್ಸಂಜೆಗೆ ಮುನ್ನ ಎಲ್ಲರೂ ಮನೆ ಸೇರುವುದು ಕಡ್ಡಾಯವಾಗಿತ್ತು.

ಅವರ ಬೆನ್ನಿಗೆ ಬಂದವರೇ, ಅಜ್ಜ ಕಣ್ಣಪ್ಪ. ನಾವು ಮಕ್ಕಳ ಪಾಲಿಗೆ ಅವರು ಕನ್ನಾಟಿ ಅಜ್ಜ ಆಗಿದ್ದರು. ನಮ್ಮ ಭಾಷೆಯಲ್ಲಿ ಕನ್ನಾಟಿ ಅಂದರೆ ಕನ್ನಡಕ. ಅಜ್ಜ ದಪ್ಪ ಗಾಜಿನ ಕನ್ನಡಕ ಧರಿಸುತ್ತಿದ್ದುದರಿಂದ ಅವರು ನಮ್ಮ ಪಾಲಿಗೆ ಕನ್ನಾಟಿ ಅಜ್ಜ. ಅಮ್ಮನ ಉಳಿದ ದೊಡ್ಡಪ್ಪಂದಿರೆಲ್ಲ ಅಳಿದು, ಪ್ರಿಯರಾದ ಜಡ್ಜ್‌ ದೊಡ್ಡಪ್ಪ ದೂರ ಮದರಾಸಿನಲ್ಲಿದ್ದುದರಿಂದ, ತನ್ನ ತಂದೆಯ ಕಡೆಯಿಂದ ಕನ್ನಾಟಿ ದೊಡ್ಡಪ್ಪನೇ ಅಮ್ಮನಿಗೆ ಇಷ್ಟ ಬಂಧುವಾಗಿದ್ದರು. ಜ್ಯೋತಿ ಲೇನ್‌ನಲ್ಲಿ ಈಗಿನ ಪಿ.ಎಸ್.ಆರ್ ಎದುರುಗಡೆ ಓಣಿಯೊಳಗೆ ಅವರ ನಿವಾಸ- ನಮ್ಮ ಪ್ರಿಯ ʻಆಲ್ಡೇಲ್ʼ.‌

ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಮೇಧಾವಿ ವಿದ್ಯಾರ್ಥಿಯಾಗಿದ್ದ ತರುಣ ಕಣ್ಣಪ್ಪ, ಬಿ.ಎ. ಪದವಿ ಪರೀಕ್ಷೆಯಲ್ಲಿ ಲ್ಯಾಟಿನ್‌ ಮತ್ತು ಗಣಿತ ವಿಷಯಗಳಲ್ಲಿ ರ‍್ಯಾಂಕ್‌ ಗಳಿಸಿದವರು. ಅಲೋಶಿಯಸ್‌ ಕಾಲೇಜಿನ ಪ್ರಥಮ ರ‍್ಯಾಂಕ್‌ ಹೋಲ್ಡರ್‌ ಅವರು. ಅಲ್ಲೇ ಪ್ರಾಧ್ಯಾಪಕರಾಗಿ ಸೇರಿಕೊಂಡು, ವೃತ್ತಿವಿರತರಾದ ಅನಿತರಲ್ಲೇ ಕ್ರೈಸ್ತ ಧರ್ಮವನ್ನು ಸ್ವೀಕರಿಸಿ ಕ್ರೈಸ್ತರಾದರು. ಮನೆಯ ಪಕ್ಕದಲ್ಲೇ ಇದ್ದ ಬೆಂದೂರ್‌ ಚರ್ಚ್‌ ಮತ್ತು ಕಾಲೇಜಿನಲ್ಲಿ ಐಚ್ಛಿಕ ಪಠ್ಯವಾಗಿದ್ದ ಬೈಬಲ್‌ ಮತ್ತು ಲ್ಯಾಟಿನ್‌ ಅವರ ಮೇಲೆ ಬೀರಿದ ಪ್ರಭಾವ ಅಪಾರ! ರ‍್ಯಾಂಕ್‌ ವಿಜೇತ ಹಿಂದೂ ಯುವಕ ಹೀಗೆ ಮತಾಂತರವಾದುದನ್ನು ಸಹಿಸದೆ ನಗರದಲ್ಲಿ ಆಗ ಸಣ್ಣ ಮಟ್ಟಿನ ಮತೀಯ ಗಲಭೆ ಎದ್ದಿತೆಂದು ಕೇಳಿದ್ದೇವೆ. ಅದೇ ಕಾರಣದಿಂದ ಉಚ್ಚಿಲ್‌ ಕಣ್ಣಪ್ಪ ಅವರು ಮೂರು ತಿಂಗಳ ಕಾಲ ನಗರದಿಂದ ಹೊರಗೆ, ದೂರ ಬೆಳಗಾವಿಯಲ್ಲಿ ಅಜ್ಞಾತವಾಸದಲ್ಲಿ ಇರಬೇಕಾಗೆ ಬಂದಿತಂತೆ. ಮುಂದೆ ಮದರಾಸಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ,‌ ಎಮ್.ಎ.ಎಲ್.‌ಟಿ. ಪದವಿಗಳಿಸಿ ಮದರಾಸ್‌ ಪ್ರಾಂತ್ಯದ ವಿವಿಧ ಕಾಲೇಜ್‌ಗಳಲ್ಲಿ ಪ್ರಾಧ್ಯಾಪಕರಾಗಿ ವೃತ್ತಿನಿರತರಾದರು. ಕೊನೆಗೆ ಮಂಗಳೂರಿನ ಗವರ್ನ್‌ಮೆಂಟ್‌ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಾವು ಮಕ್ಕಳು ಅವರ ಸಂಪರ್ಕಕ್ಕೆ ಬರುವ ವೇಳೆಗೆ ಅವರು ಸೌತ್‌ ಕೆನರಾ ಜಿಲ್ಲಾ ವಿದ್ಯಾಧಿಕಾರಿ – ಡಿ.ಇ.ಒ. ಆಗಿ ಖ್ಯಾತರಾಗಿದ್ದರು. ನಮ್ಮ ಸಮವಯಸ್ಕ ಅನೇಕರ ಸರ್ಟಿಫಿಕೇಟ್‌ಗಳಲ್ಲಿ ಉಚ್ಚಿಲ್‌ ಕಣ್ಣಪ್ಪ ಅವರ ಸಹಿ ಇದೆಯೆಂದು ಹಲವರು ಸ್ಮರಿಸಿಕೊಂಡಿದ್ದಾರೆ.

ಅವರ ಕುಟುಂಬ ಜೀವನದ ಬಗ್ಗೇ – ಮದುವೆಯಾಗಿ ಗೃಹಸ್ಥನಾಗಬೇಕೆಂಬ ತನ್ನಮ್ಮನ ಒತ್ತಾಯಕ್ಕೆ ಮಣಿದು, ಕ್ರೈಸ್ತ ಹುಡುಗಿಯನ್ನೇ ಅವರು ವಿವಾಹವಾದರು. ನಾಲ್ಕು ಹೆಣ್ಣು, ಎರಡು ಗಂಡು ಮಕ್ಕಳ ಸುಖೀ ಸಂಸಾರ ಅವರದು. ನಾಲ್ವರು ಹೆಣ್ಮಕ್ಕಳೂ ವಿದ್ಯಾರತ್ನಗಳಂತೆ ಇದ್ದರೆ, ಗಂಡು ಮಕ್ಕಳು ವಿದ್ಯೆಯಲ್ಲಿ ಪ್ರಾವೀಣ್ಯ ಪಡೆಯದ ಕೊರಗು ಅವರಿಗಿತ್ತು. ಹಿರಿಯ ಮಗ ಆರ್ಥರ್‌ ಅಲೋಶಿಯಸ್‌ ಫಿಸಿಕಲ್‌ ಟ್ರೈನಿಂಗ್‌ ಇನಸ್ಟ್ರಕ್ಟರ್‌ ಆಗಿದ್ದರೆ, ಕಿರಿಯ ಮಗ ಎರಿಕ್‌ ಅಲೋಶಿಯಸ್‌ ಬೊಂಬಾಯಿಯ ಬೆಸ್ಟ್‌ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದರು. ಜೀವನಸಂಧ್ಯೆಗೆ ಮುನ್ನವೇ ಅವರಿಬ್ಬರೂ ತಮ್ಮ ಬಾಳದಾರಿಯಲ್ಲಿ ನಮ್ಮೆಲ್ಲರನ್ನು ಅಗಲಿದ್ದಾರೆ.

ಹಿರಿಯ ಮಗಳು ಗ್ಲಾಡೀಸ್‌ ನನ್‌ ಆಗಿ ʻಸಿಸ್ಟರ್‌ ಆಂಟೊನೆಟ್‌ʼಆದರು.ಅವರು ಮದರಾಸಿನ ಸೈಂಟ್‌ ಮೇರಿ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕಿಯಾಗಿದ್ದರು. ನಿವೃತ್ತಿಯ ಬಳಿಕ ಅಲ್ಲೇ ಉಳಿದು ಬಡವರ, ಅನಾಥರ ಸೇವಾಕಾರ್ಯಗಳಲ್ಲಿ ತೊಡಗಿಕೊಂಡು, ವೃದ್ಧಾಪ್ಯದಲ್ಲಿ ಅಲ್ಲೇ ಕ್ರಿಸ್ತೈಕ್ಯರಾದರು.

ಅವರ ತಂಗಿ ಆಂಟ್‌ ಐರಿನ್‌ ಕೂಡಾ ನನ್‌ ಆಗಿ ʻಸಿಸ್ಟರ್‌ ಬ್ರೀಟಿಸ್‌ʼ ಎಂದು ಹೆಸರಾಗಿತ್ತು. ಮುಂದೆ ನಗರದ ಲೇಡಿಹಿಲ್‌ ಕಾನ್ವೆಂಟ್‌ನಲ್ಲಿ ಮದರ್‌ ಸುಪೀರಿಯರ್‌ ಆಗಿದ್ದು, ನಗರದ ವಿದ್ಯಾಸಂಸ್ಥೆಗಳಲ್ಲಿ ಸುಪರಿಚಿತರಾಗಿದ್ದವರು. ಸೌಮ್ಯ ಸ್ವಭಾವ, ಮೃದುಹಾಸದ ಸೌಜನ್ಯಶೀಲೆ ಮದರ್‌ ಬೀಟ್ರಿಸ್‌ -ಸೈಂಟ್‌ ಎಂದೇ ಪರಿಗಣಿಸಲ್ಪಟ್ಟಿದ್ದರು. ಅವರಿಗೆ ಮರಣೋಪರಾಂತ ಸೈಂಟ್‌ಹುಡ್‌ ಪ್ರದಾನಿಸಲ್ಪಡಬಹುದು ಎಂಬ ನಿರೀಕ್ಷೆಯೂ ಎಲ್ಲರದಾಗಿತ್ತು. ಹಾಸಿಗೆ ಹಿಡಿದಿದ್ದ ಕೊನೆಯ ದಿನಗಳಲ್ಲೂ ಅವರ ಮುಖದ ಸೌಮ್ಯ ನಗು, ದಿವ್ಯ ತೇಜಸ್ಸು ಮಾಸಿರಲಿಲ್ಲ. ಇಸವಿ 2010 ನವೆಂಬರ್ ಹತ್ತರಂದು ಕ್ರಿಸ್‌ಮಸ್‌ ಮಾಸಾಕ್ಕೆ ಮುನ್ನ ಅವರು ಬಲು ಶಾಂತರಾಗಿ ಕ್ರಿಸ್ತೈಕ್ಯರಾದರು.

ಮೂರನೇ ಮಗಳು ಲೀನಾ ಅಲೋಶಿಯಸ್‌ ನಗರದ ಗವರ್ನ್‌ಮೆಂಟ್‌ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರ ತಂಗಿ ಫ್ಲೇವಿ ಅಲೋಶಿಯಸ್‌ ದೆಹಲಿಯ ಸೈಂಟ್‌ ಆಕ್ಸಿಲಿಯನ್‌ ಸ್ಕೂಲ್‌ನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕಿಯಾಗಿ ನಿವೃತ್ತರಾಗಿ ಮನೆಗೆ ಮರಳಿ ಅಕ್ಕನಿಗೆ ಜೊತೆಯಾದವರು. ಇಂಗ್ಲಿಷ್‌ ಸಾಹಿತ್ಯದ ಎನ್‌ಸೈಕ್ಲೊಪೀಡಿಯಾದಂತೆ ಇದ್ದ ಆಂಟ್‌ ಲೀನಾ ಹಾಗೂ ಅವರಿಗೆ ತಕ್ಕ ಜೊತೆಯಾದ ಆಂಟ್‌ ಫ್ಲೇವಿಇಂಗ್ಲಿಷ್‌ ಸಾಹಿತ್ಯದಲ್ಲಿ ನನ್ನ ಪ್ರಾತಃಸ್ಮರಣೀಯ ಬಂಧುಗಳು. ಪಿ.ಯು.ಸಿ.ಯಲ್ಲಿ ನನಗೆ ಉಪಪಠ್ಯವಾಗಿದ್ದ ಡೇವಿಡ ಕಾಪರ್‌ಫೀಲ್ಡ್‌ ಮತ್ತು ಒಥೆಲೋ ಕೃತಿಗಳಿಗೆ ನೋಟ್ಸ್‌ ಮಾಡಿಕೊಳ್ಳಲೆಂದು ನಾನು ಅಜ್ಜ ಕಣ್ಣಪ್ಪ ಅವರ ಸಹಾಯ ಪಡೆಯಲು ಹೋಗಿದ್ದೆ. ಗ್ಲುಕೋಮಾದಿಂದ ಅಜ್ಜನಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅದರೂ ಅವರು ನನಗೆ ಪಾಠ ಮಾಡಿ, ನೋಟ್ಸ್‌ ಬರೆದುಕೊಡುವಂತೆ ಮಗಳು ಲೀನಾಗೆ ಹೇಳಿದರು. ಆಂಟಿಯಂದಿರು ಲೀನಾ ಮತ್ತು ಫ್ಲೇವಿ ಬರೆದಿತ್ತ ಆ ನೋಟ್ಸ್‌ ನನ್ನನ್ನು ಪ್ರಭಾವಿಸಿ, ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ನನ್ನಲ್ಲಿ ಅಭಿರುಚಿ ಹೆಚ್ಚಿಕೊಳ್ಳುವಂತೆ ಮಾಡಿತು.

ಕಾಲೇಜಿನಲ್ಲಿ ಡೇವಿಡ್‌ ಕಾಪರ್‌ಫೀಲ್ಡ್‌ ಕೃತಿಯನ್ನು ತಮಗೆ ಪಾಠ ಮಾಡಿದ್ದ ಗುರುಗಳು ಅಲೋಶಿಯಸ್‌ ಕಣ್ಣಪ್ಪ ಅವರಿಗೆ ಅವರ ಶಿಷ್ಯ ಎ. ಸುಬ್ಬಯ್ಯ ಅವರು ಸಲ್ಲಿಸಿದ ಪ್ರೀತಿಯ ಗುರುದಕ್ಷಿಣೆಯೇ, ಅವರು ರಚಿಸಿದ ಡೇವಿಡ್‌ ಕಾಪರ್‌ಫೀಲ್ಡ್‌ ಕೃತಿಯ ಕನ್ನಡಾನುವಾದ. ತಮ್ಮ ಗುರುಗಳಿಗೆ ಅವರು ಸಮರ್ಪಿಸಿದ ಕೃತಿಯ ಆ ಪ್ರತಿಯನ್ನು ಅಜ್ಜ ನಮ್ಮಣ್ಣನಿಗೆ ನೀಡಿದ್ದು, ಅದು ನಮ್ಮ ಮನೆಯ ಪುಸ್ತಕ ಸಂಪತ್ತಿನಲ್ಲಿ ಒಂದಾಗಿದೆ.

ವರ್ಷಗಳ ಬಳಿಕ ನಾನು ಮಾರ್ಗರೆಟ್‌ ಮಿಶೆಲ್‌ಳ ಜಗದ್ವಿಖ್ಯಾತ  ವಿಶ್ವಸಾಹಿತ್ಯ ಕೃತಿ ʼಗಾನ್‌ ವಿತ್‌ ದ ವಿಂಡ್‌ʼನ ಅನುವಾದದಲ್ಲಿ ತೊಡಗಿದ್ದಾಗ, ಅಲ್ಲಿ ಬಂದೊಂದು ಕೊಟೇಶನ್‌ ಬಗ್ಗೆ ಅರಿವ ಕುತೂಹಲದಿಂದ ಆಂಟಿ ಲೀನಾರಿಗೆ ಪತ್ರ ಬರೆದು ಕೇಳಿದ್ದೆ. ಕೃತಿಯಲ್ಲಿ ಹೊತ್ತಿ ಉರಿವ ಯುದ್ಧಭೂಮಿ ಅಟ್ಲಾಂಟಾದಿಂದ ಟಾರಾಗೆ ಮರಳುವ ಮಾರ್ಗಮಧ್ಯೆ, ಆ ಮುರುಕು ಬಂಡಿಯಲ್ಲಿ ಸ್ಕಾರ್ಲೆಟ್‌ ಮತ್ತವಳ ಪರಿವಾರವನ್ನು ತ್ಯಜಿಸಿ ಯುದ್ಧಕ್ಕೆ ಹೊರಟು ನಿಂತಾಗ ರೆಟ್‌ಬಟ್ಲರ್‌ ಉದ್ಧರಿಸುವ ಮಾತು ʼಐ ವುಡ್‌ ನಾಟ್‌ ಲವ್‌ ದೀ ಡಿಯರ್‌ ಸೋ ಮಚ್‌, ಲವ್ಡ್‌, ಐ ನಾಟ್‌ ಆನರ್‌ ಮೋರ್!‌ʼ ಇದು ಯಾರು ಯಾರಿಗೆ ಹೇಳಿದ್ದೆಂಬ ನನ್ನ ಕುತೂಹಲಕ್ಕೆ ಆಂಟಿ ಕೂಡಲೇ ಪತ್ರ ಬರೆದು ಉತ್ತರಿಸಿದ್ದರು.ʼಟು ಲುಕಾಸ್ಟಾ – ಗೋಯಿಂಗ್‌ ಟು ದ ವಾರ‍್ಸ್‌ʼ ಕವನದಲ್ಲಿ ಲಾರ್ಡ್‌ ರಿಚರ್ಡ್‌ ಲವ್‌ಲೇಸ್‌, ತನ್ನ ಲೇಡಿಲವ್‌ ಲುಕಾಸ್ಟಾಗೆ ಹೇಳುವ ಮಾತು, ಎಂದು ಅವರು ಬರೆದ ಪತ್ರ ನನ್ನ ಅಮೂಲ್ಯ ಪತ್ರ ಸಂಪತ್ತಿನಲ್ಲಿ ಒಂದಾಗಿದೆ.

ಮುಂದಿನ ವಿಶ್ವಸಾಹಿತ್ಯ ಕೃತಿಗಳ ನನ್ನೆಲ್ಲ ಅನುವಾದಗಳನ್ನೂ, ಕನ್ನಡ ಓದಲರಿಯದಿದ್ದರೂ ಆಂಟಿ ಕೈಗೆತ್ತಿಕೊಂಡು ಹರಸಿದ್ದರು. ಇಂಗ್ಲಿಷ್‌ ಸಾಹಿತ್ಯದ ವಿಶ್ವಕೋಶ – ಎನ್‌ಸೈಕ್ಲೊಪೀಡಿಯಾ ಅಂದೆ – ಆದರೆ ತನ್ನ ತಂದೆ ಅಲೋಶಿಯಸ್‌ ಕಣ್ಣಪ್ಪ ಅವರಂತೆಯೇ ಆಂಟ್‌ ಲೀನಾ ಅವರ ಕುಂದಿದ ದೃಷ್ಟಿಯೂ ಕೊನೆಯ ವರ್ಷಗಳಲ್ಲಿ ಸಂಪೂರ್ಣ ನಶಿಸಿ ಹೋದುದು ನನ್ನ ಮನಕ್ಕೆ ತುಂಬ ನೋವಿತ್ತಿತ್ತು. ಎಷ್ಟೋ ವಿದ್ಯಾರ್ಥಿಗಳಿಗೆ, ನನ್ನಂತಹ ಆಸಕ್ತರಿಗೆ ಸಾಹಿತ್ಯದ ಬೆಳಕಾಗಿದ್ದ ಅವರು ಕತ್ತಲಲ್ಲಿ ಉಳಿಯಬೇಕಾಗಿ ಬಂದುದು ವಿಧಿಯ ವಿಪರ್ಯಾಸ ಎಂದೇ ಅನ್ನಬೇಕು. ಎರಡು ವರ್ಷಗಳ ಹಿಂದೆ ನಮ್ಮನ್ನಗಲಿದ ಪ್ರೊ. ಕೇಶವ ಉಚ್ಚಿಲ್‌ ಅವರೂ ತಮ್ಮ ಈ ನೆಚ್ಚಿನ ಪ್ರಾಧ್ಯಾಪಿಕೆಯನ್ನು ಕಾಣಲೆಂದು ಈಗ ಐದು ವರ್ಷಗಳ ಹಿಂದೆ ನನ್ನೊಡನೆ ಬಂದು ಭೇಟಿಯಾಗಿ ಧನ್ಯರಾಗಿದ್ದರು. ತಮ್ಮ ನಯ, ವಿನಯ, ಸೌಮ್ಯ ಮೆಲುನಗು, ಹಿತಕರ ಮೆಲುನುಡಿಗಳ ಪಾವನ ಚರಿತೆ, ನನ್ನ ಆಂಟಿ ಲೀನಾ.

ವರ್ಷದ ಹಿಂದೆ ಒಂದು ಬೆಳಗಿನಲ್ಲಿ ಸುಖಮರಣವನ್ನಪ್ಪಿದ ಆಂಟ್‌ ಫ್ಲೇವಿ ಅವರ ಬೆನ್ನಿಗೇ ಮತ್ತೆ ಕೆಲ ತಿಂಗಳುಗಳಲ್ಲಿ ಆಂಟ್‌ ಲೀನಾ ಕೂಡಾ ತಮ್ಮ ತೊಂಬತ್ನಾಲ್ಕರ ಪ್ರಾಯದಲ್ಲಿ ನಮ್ಮನ್ನಗಲಿ ಕ್ರಿಸ್ತೈಕ್ಯರಾದರು. ಪ್ರೀತಿಯಿಂದ ಈ ಎಲ್ಲ ಹಿರಿಯರ ಸೇವೆಗೈದ ಅವರ ಸೋದರ ಸೊಸೆ – ಆರ್ಥರ್‌ ಅಂಕಲ್‌, ಹಿಲ್ಡಾಂಟಿಯ ಮಗಳು, ಅಜ್ಜ ಕಣ್ಣಪ್ಪ ಅವರ ಮೊಮ್ಮೊಗಳು ಪದವು ಪಾಂಪೆ ಹೈಸ್ಕೂಲ್‌ನಲ್ಲಿ ಪ್ರಾಂಶುಪಾಲೆಯಾಗಿದ್ದು ಇದೀಗ ನಿವೃತ್ತರಾದ ನಮ್ಮ ಪ್ರಿಯ ಗ್ಲಾಡಿ ಇಲ್ಲಿದ್ದಾರೆ.

ಸೈಂಟ್‌ ಅಲೋಶಿಯಸ್‌ ಕಾಲೇಜ್‌ ಕಟ್ಟಡ ಹಾಗೂ ಫಾ| ಮುಲ್ಲರ್ಸ್‌ ಸೇವಾಸ್ಪತ್ರೆಯ ಕಟ್ಟಡಗಳ ಸ್ಥಾಪಕರು ಹಾಗೂ ಪೋಷಕರ ಹೆಸರುಗಳ ಯಾದಿಯಲ್ಲಿ ಅಜ್ಜ ಶೆವೆಲಿಯರ್‌ ಅಲೋಶಿಯಸ್‌ ಉಚ್ಚಿಲ್‌ ಕಣ್ಣಪ್ಪನವರ ಹೆಸರು ಕೆತ್ತಲ್ಪಟ್ಟಿದೆ. ನಮ್ಮೂರ ಉಚ್ಚಿಲ ಬೋವಿ ಶಾಲೆಗಾಗಿ ಸರಕಾರದ ಖಾಯಂ ಮಂಜೂರಾತಿ ದೊರಕಿಸಿ ಕೊಟ್ಟವರು ಅಜ್ಜ ಅಲೋಶಿಯಸ್‌ ಉಚ್ಚಿಲ ಕಣ್ಣಪ್ಪ. ಅವರು ಫಾ. ಮುಲ್ಲರ‍್ಸ್ ಸೇವಾಸ್ಪತ್ರೆಯ ಆಡಳಿತ ಸಮಿತಿಯ ಸದಸ್ಯರಾಗಿ, ಮಂಗಳೂರು ಹಾಲು ಮಾರಾಟ ಫೆಡರೇಶನ್‌ನ ಸ್ಥಾಪಕಾಧ್ಯಕ್ಷರಾಗಿ, ಎಂ.ಸಿ.ಸಿ. ಬ್ಯಾಂಕ್‌ ನಿರ್ದೇಶಕರಾಗಿ, ಕಥೋಲಿಕ್‌ ಕ್ಲಬ್‌ನ ಆಡಳಿತಗಾರರಾಗಿ ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ದುಡಿದವರು.

ʼಮ್ಯಾಂಗಲೋರಿಯನ್‌ʼ ಇಂಗ್ಲಿಷ್‌ ದಿನಪತ್ರಿಕೆಯನ್ನು ಸ್ಥಾಪಿಸಿದವರು. ʼಮ್ಯಾಂಗಲೋರಿಯನ್‌ʼ ಕೊಂಕಣಿ ಪೀರಿಯಾಡಿಕಲ್ಸ್‌ನ ಸಂಪಾದಕರಾಗಿದ್ದವರು. ನಗರದಲ್ಲಿ ಕಲಿಯುವ ಉಚ್ಚಿಲದ ಬಂಧುಗಳಿಗಾಗಿ ಫಳ್ನೀರ್‌ ಹೈಲ್ಯಾಂಡ್‌ನಲ್ಲಿ ಹಾಸ್ಟೆಲ್‌ ಒಂದನ್ನು ಸ್ಥಾಪಿಸಿದ್ದರು. ಅಲ್ಲಿಂದಾಗಿ ಹೋಗುವಾಗಲೆಲ್ಲ ನಾವು ಮಕ್ಕಳು, ಕನ್ನಾಟಿ ಅಜ್ಜನ ಹಾಸ್ಟೆಲ್‌, ಎಂದನ್ನುತ್ತಿದ್ದೆವು.

ಅಲೋಶಿಯಸ್‌ ಉಚ್ಚಿಲ್‌ ಕಣ್ಣಪ್ಪ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಗಾಗಿ ಅಂದಿನ ಪೊಪ್‌ರವರು, ʻಶೆವೆಲಿಯರ್‌ʼ ಎಂಬ ಅಭಿದಾನದೊಂದಿಗೆ ʻನೈಟ್‌ ಆಫ್‌ ಸೈಂಟ್‌ ಗ್ರೆಗರಿʼ ಪದವಿಯನ್ನಿತ್ತು ಅವರನ್ನು ಸನ್ಮಾನಿಸಿದ್ದರು. ಶೆವೆಲಿಯರ್‌ ಎಂದರೆ ಬಹಾದುರ್‌, ಸರ್ದಾರ್‌, ವೀರಪುರುಷ ಎಂದರ್ಥ. ಹಳೆಯ ಕಾಲದ ನೋಬಿಲಿಟಿಯ ಈ ಬಿರುದು ಅವರಿಗೆ ಅನ್ವರ್ಥಕವಾಗಿತ್ತು.

ಅಜ್ಜಂದಿರಾದಿಯಾಗಿ ಆ ಹಿರಿಯ ಪರಂಪರೆಯ ನಡೆನುಡಿ, ಆಚಾರ ವಿಚಾರಗಳು ಎಷ್ಟೊಂದು ಉದಾತ್ತವೂ, ಶ್ರೇಷ್ಠವೂ, ಅನುಕರಣೀಯವೂ ಆಗಿದ್ದವು! ಅವರ ದನಿಯಲ್ಲಿ ಎಂತಹ ಘನತೆ, ಗಾಂಭೀರ್ಯ, ಪರಸ್ಪರ ಗೌರವಾದರ ಇರುತ್ತಿತ್ತು! ಭಾಷೆಯಲ್ಲಿ ಎಂತಹ ಸಮ್ಮೋಹಕ ಶಕ್ತಿಯಿತ್ತು! ಸಚ್ಚಾರಿತ್ರ್ಯ, ಸನ್ನಡತೆಯ ದಾರಿದೀಪಗಳಾದ ಹಿರಿಯ ಪರಂಪರೆಯದು.

ದೃಷ್ಟಿ ಮಂದವಾಗಿದ್ದ ಅಜ್ಜನ ಕೊನೆಯ ದಿನಗಳಲ್ಲಿ ಅವರ  ಕಣ್ಣು ಹಾಗೂ ಊರುಗೋಲಾಗಿದ್ದವರು, ನಮ್ಮಣ್ಣ ಮೋಹನ್.‌ ಅವರಿಗೆ ಬಂದ ಪತ್ರಗಳನ್ನು ಓದಲು, ಉತ್ತರಿಸಲು ನೆರವಾಗುತ್ತಿದ್ದ ಅಣ್ಣ, ಹೊರಗೆ ಹೋಗಬೇಕಾದಾಗಲೆಲ್ಲ ಅಜ್ಜನಿಗೆ ಊರುಗೋಲಿನಂತಿದ್ದ. ಗಾಂಧೀಜಿ ಹುತಾತ್ಮರಾದಂದೇ ಹುಟ್ಟಿದ ನಮ್ಮಣ್ಣನನ್ನು ಅಜ್ಜ ʻಗಾಂಧಿʼ ಎಂದೂ ಛೇಡಿಸುವುದಿತ್ತು. ಅವರ ವೃಧ್ಧಾಪ್ಯದಲ್ಲಿನ ತನ್ನ ಸಹಚರ್ಯದ ಬಗ್ಗೆ, ಅವರ ವ್ಯಕ್ತಿತ್ವದ ಮೇಲೆ ಬೆಳಕು ಬೀರುವ ವಿಷಯಗಳ ಬಗ್ಗೆ  ಅಣ್ಣ ಮೋಹನ್‌ ಅವರಿಂದಲೇ ಕೇಳೋಣ.

1967 ಜುಲೈ 6, ಅಜ್ಜನ 80ನೇ ಹುಟ್ಟುಹಬ್ಬದಂದು ವಿಶ್‌ ಮಾಡಿ ಬ್ಲೆಸ್ಸಿಂಗ್ಸ್‌ ಪಡೆಯಲೆಂದು ಬಂದ ನಮ್ಮಣ್ಣನಿಗೆ ಅದೇ ತನ್ನ ಕೊನೆಯ ಹುಟ್ಟುಹಬ್ಬ ಎಂದು ಅಜ್ಜ ಅಂದಾಗ ನೊಂದುಕೊಂಡ ಅಣ್ಣನಿಗೆ, ʼಚಿಂತಿಸಬೇಡ ನಿನ್ನ ಹುಟ್ಟುಹಬ್ಬದವರೆಗೆ ಖಂಡಿತ ಇರುವೆʼ, ಎಂದರು ಅಜ್ಜ. ಅಂತೆಯೇ ಮಾತಿತ್ತಂತೆ ಅಣ್ಣನ ಹುಟ್ಟುಹಬ್ಬದ ವರೆಗೆ ಬದುಕಿ ಉಳಿದರವರು!

ಡಿಸೆಂಬರ್‌ ತಿಂಗಳ ಒಂದಿನ ಕಿಟಕಿಯ ಹೊರಗೆ ನೋಡುತ್ತಾ ಮಗಳೊಡನೆ, ʼನೋಡು, ತಮ್ಮ ಕೃಷ್ಣಪ್ಪ ಅಲ್ಲಿ ನನ್ನನ್ನು ಕರೆಯುತ್ತಿದ್ದಾನೆ,ʼ ಎಂದಿದ್ದರು. ಆ ಅವರ ಪ್ರಿತಿಯ ಸೋದರ – ನಮ್ಮಜ್ಜನ ಬಗ್ಗೆ ನಮಗೆ ಅನಿತಾದರೂ ತಿಳಿಯುವಂತಾದುದು ಅಜ್ಜ ಕಣ್ಣಪ್ಪ ಅವರಿಂದಲೇ. 27ರ ಎಳೆಹರೆಯದಲ್ಲೇ ಅಸಿಸ್ಟೆಂಟ್‌ ಕಮಿಶನರ್‌ ಆಗಿ ಭಡ್ತಿ ಹೊಂದಿ ಆ ಸ್ಥಾನವನ್ನು ಅಲಂಕರಿಸುವ ಮುನ್ನವೇ ಹೃದಯಾಘಾತದಿಂದ ಮರಣವನ್ನಪ್ಪಿದ ತನ್ನ ಈ ತಮ್ಮ ಬದುಕಿದ್ದರೆ ತಮ್ಮೆಲ್ಲರಿಗಿಂತಲೂ ಉಛ್ರಾಯಕ್ಕೆ ಏರುತ್ತಿದ್ದುದು ಖಂಡಿತ, ಎನ್ನುತ್ತಿದ್ದರು ಅಜ್ಜ ಕಣ್ಣಪ್ಪ.

ಕ್ರಿಕೆಟ್‌ ಆಟದಲ್ಲಿ ವೇಗದ ಬೌಲರ್‌ ಆಗಿದ್ದ ನಮ್ಮಜ್ಜ ಕೃಷ್ಣಪ್ಪ, ಅಲೋಶಿಯಸ್‌ ಕಾಲೇಜಿನಲ್ಲಿ ನಡೆದ ಒಂದು ಮ್ಯಾಚ್‌ನಲ್ಲಿ ತಾನೆಸೆದ ಬಾಲ್‌ ಬ್ಯಾಟ್ಸ್‌ಮ್ಯಾನ್‌ನ ಹೊಡೆತಕ್ಕೆ ನೇರವಾಗಿ ಬಂದು ತನ್ನೆದೆಗೇ ಅಪ್ಪಳಿಸಿದಾಗ, ಎದೆಯಲ್ಲಿ ರಕ್ತ ಹೆಪ್ಪುಗಟ್ಟಿ ತೀವ್ರ ಸಮಸ್ಯೆಯಾದುದು; ಮುಂದೆ ಅಸಿಸ್ಟೆಂಟ್‌ ಕಮಿಶನರ್‌ ಆಗಿ ಭಡ್ತಿ ಹೊಂದಿದಾಗ ಗೆಳೆಯರ ಸಂತೋಷಕೂಟದ ಮೋಜಿನ ಕುದುರೆ ಸವಾರಿಯಲ್ಲಿ ಆ ಹೃದಯದ ಮೇಲೆ ಬಿದ್ದ ಒತ್ತಡದಿಂದ ಹೃದಯಾಘಾತ ಸಂಭವಿಸಿದ್ದು – ಇದೆಲ್ಲವೂ ಅಜ್ಜ ಕಣ್ಣಪ್ಪ ಅವರಿಂದಲೇ ನಮಗೆ ತಿಳಿದು ಬಂದುದು.

ಜನವರಿ 30 ತನ್ನ ಹುಟ್ಟುಹಬ್ಬದಂದು ನಮ್ಮಣ್ಣ ಅಮ್ಮನೊಡನೆ ಅಜ್ಜನ ಆಶೀರ್ವಾದಕ್ಕಾಗಿ ಬಳಿಸರಿದಾಗ ಅಜ್ಜನ ಅಂತ್ಯ ಅದಾಗಲೇ ಸಮೀಸಿತ್ತು. ಆದರೂ ಬಳಿಯಿದ್ದ ತನ್ನ ಲೇನ್‌ಕಾಟೇಜ್‌ ಅಣ್ಣನ ಮಗ ಡಾ. ರಾಧಾಕೃಷ್ಣ ಅವರೊಡನೆ ಎಂದಿನಂತೆ ತಮಾಷೆಯಾಗಿ, ʼಓ, ಗಾಂಧಿ ಹ್ಯಾಸ್‌ ಕಮ್!‌ʼ ಎಂದಿದ್ದರು. ಆ 1968 ಫೆಬ್ರವರಿ 1ರ ರಾತ್ರಿಯ ಅಜ್ಜನ ಕೊನೆಯ ಕ್ಷಣಗಳ ಬಗ್ಗೆ ಪ್ರತ್ಯಕ್ಷದರ್ಶಿಯಾಗಿದ್ದ ನಮ್ಮಣ್ಣನಿಂದಲೇ ಕೇಳೋಣ. ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ಇಚ್ಛಾ ಮರಣಿಯಾಗಿ ಕ್ರಿಸ್ತೈಕ್ಯರಾದ ಶ್ರೇಷ್ಠರು, ನಮ್ಮಜ್ಜ ಶೆವೆಲಿಯರ್‌ ಅಲೋಶಿಯಸ್‌ ಉಚ್ಚಿಲ್‌ ಕಣ್ಣಪ್ಪ. ಕುಟುಂಬ ವತ್ಸಲರಾಗಿ, ವಿದ್ಯಾರ್ಥಿಗಳಿಗೆ, ನಮ್ಮಂಥಾ ಅಂದಿನ ಎಳೆಯರಿಗೆ ಮತ್ತು ಸಮಾಜಕ್ಕೇ ಬೆಳಕಾಗಿ ಬಾಳಿದ ಆ ದಿವ್ಯ ಚೇತನಕ್ಕೆ ನನ್ನ ಹೃತ್ಪೂರ್ಣ ನಮನ!

ಆ ಶ್ರೇಷ್ಠರ ಬಗ್ಗೆ ನಾನರಿತುದನ್ನು ನಿಮ್ಮೊಡನೆ ಹಂಚಿಕೊಳ್ಳುವ ಆವಕಾಶವಿತ್ತ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಹೃತ್ಪೂರ್ವಕ ವಂದನೆ. ಅಜ್ಜ ಅಲೋಶಿಯಸ್‌ ಕಣ್ಣಪ್ಪ ಅವರ ಪ್ರೀತ್ಯಾಭಿಮಾನದ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್‌ ಕಾಲೇಜ್‌ ಸಭಾಂಗಣದಲ್ಲೇ ಈ ನುಡಿನಮನ ಸಲ್ಲಿಸುತಿರುವುದು ನನ್ನ ಭಾಗ್ಯವೆಂದೇ ಅಂದುಕೊಂಡಿದ್ದೇನೆ. ಸಮಸ್ತರಿಗೂ ನನ್ನ ವಂದನೆ.

 

ಶ್ಯಾಮಲಾ ಮಾದವ್ ಹಿಚ್ಯಾ ಉಲವ್ಪಾ ಉಪ್ರಾಂತ್‌ ಸಂವಾದ್‌ ಕಾರ್ಯೆಂ ಚಲ್ಲೆಂ. ಹಾಂತುಂ ಶ್ಯಾಮಲಾ ಹಿಚೊ ಭಾವ್‌ ಶ್ರೀ ಎನ್. ಜಿ. ಮೊಹನಾನ್ ಜಮ್ಲೆಲ್ಯಾಂಚ್ಯಾ ಸವಾಲಾಂಕ್‌ ಜಾಪಿ ದಿಲ್ಯೊ. “ಲೂಯಿಸ್ ಕಣ್ಣಪ್ಪಾಕ್‌ ಧರ್ಮಾವಿಶಿಂ ವಿಶಾಲ್‌ ಮನೋಭಾವ್‌ ಆಸ್‌ಲ್ಲೊ. ಉಂಚ್ಲೆಂ ಶಿಕಪ್‌ ಆನಿ ಆಪ್ಲ್ಯಾ ವಾವ್ರಾಕ್‌ ಲಾಗೊನ್‌ ಲೊಕಾಸಂಗಿಂ ಭರ್ಸೊನ್‌ ಆಸ್‌ʼಲ್ಲೆಂಚ್‌ ಹಾಕಾ ಕಾರಣ್‌. ಸರ್ವಾಂಕ್‌ʼಯಿ ಸಮಾನ್‌ ರಿತಿನ್‌ ಪಳೆವ್ನ್‌ ಆಸ್ಲೆಲ್ಯಾ ತಾಣೆ ಜಿಣ್ಯೆಂತ್‌ ಜಾಯ್ತೆ ಕಶ್ಟ್‌ ಸೊಸ್ಲೆ. ಇಂಗ್ಲಿಶ್‌ ಭಾಶೆಚೆರ್‌ ಚಡ್‌ ವೋಡ್‌ ಆಸ್ಲೆಲ್ಯಾ ತಾಣೆ ಇಂಗ್ಲಿಶ್‌ ಅಧ್ಯಯನಾಚೊ ವಿಷಯ್‌ ಜಾವ್ನ್‌ ಬೈಬಲ್‌ ವಿಂಚ್ಲೊ. ನಿಮಾಣೆ ಬೈಬಲಾಥಾವ್ನ್‌ ಪ್ರೇರಿತ್‌ ಜಾವ್ನ್‌ ತಾಣೆ ಕ್ರೀಸ್ತೀ ಧರ್ಮ್‌ ಆಪ್ಣಾಯ್ಲೊʼʼ ಅಶೆಂ ಮ್ಹಣಾಲೊ. ಮುಕಾರುನ್‌, “ತಾಣೆ ಮತಾಂತರ್‌ ಜಾಲ್ಲೆವೆಳಿಂ ಮಂಗ್ಳುರಾಂತ್‌ ಲ್ಹಾನ್‌ ಮಟ್ಟಾಚೊ ಗಲಾಟೊಚ್‌ ಜಾಲೊ. ಹಾಕಾ ಲಾಗೊನ್‌ ತಾಣೆ ಮಟ್ವ್ಯಾ ಆವ್ದೆಕ್‌ ಗಾಂವ್‌ ಸೊಡಿಜೆ ಪಡ್ಲೊ. ಕ್ರಿಸ್ತಾಂವ್‌ ಧರ್ಮ್‌ ಆಪ್ಲಾಯ್ಲೆಲ್ಯಾ ಕಣ್ಣಪ್ಪಾನ್‌ ಕ್ರಿಸ್ತಾಂವ್‌ ಆಲ್ಕುಂಜ್‌ ಘೆಜೆ ಮ್ಹಣ್‌ ಯಾಜಕಾನ್‌ ದಾಬಾವ್‌ ಘಾಲ್ಲೆ ವೆಳಿಂ ತಾಣೆ ಆಪ್ಲೊ ಈಶ್ಟ್‌ ಲುವಿಸ್‌ ಮಸ್ಕರೇನ್ಹಸ್‌ ಹಾಚೆಂ ನಾಂವ್‌ʼಚ್‌ ಆಪ್ಲೆಂ ಆಲ್ಕುಂಜ್‌ ಜಾವ್ನ್‌ ಘೆತ್ಲೆಂ ಆನಿ ಅಶೆಂ ತೊ ಸರ್ದಾರ್‌ ಲುವಿಸ್‌ ಕಣ್ಣಪ್ಪ ಜಾಲೊ. ತರೀ ಆಪ್ಲ್ಯಾ ನಿಮಾಣ್ಯಾ ದಿಸಾಂನಿ ತಾಣೆ ಆಪ್ಲ್ಯಾ ಕುಟ್ಮಾಚ್ಯಾ ಸಾಂದ್ಯಾಂಕ್‌ ಧರ್ಮ್‌ ಬದ್ಲಿನಾಕಾತ್‌ ಮ್ಹಳ್ಳಿ ಸಲಹಾ ದಿಲ್ಲಿ” ಮ್ಹಣಾಲೊ ಮಾನೆಸ್ತ್‌ ಮೋಹನ್‌.

ಇಂಗ್ಲಿಶ್‌ ಭಾಶೆಚೆರ್‌ ತಾಕಾ ಮೋಗ್‌ ಆಸ್‌ʼಲ್ಲೊ. ಹಾಕಾ ಲಾಗೊನ್‌ ತಾಣೆ ʻಮ್ಯಾಂಗಲೊರ್‌ʼ ಮ್ಹಳ್ಳೆಂ ಇಂಗ್ಲಿಶ್‌ ನೆಮಾಳೆಂ ಸುರ್ವಾತ್ಲೆಂ. ಪುಣ್‌ ತೆಂ ವೆಗಿಂಚ್‌ ಬಂದ್‌ ಪಡ್ಲೆಂ. ಉಪ್ರಾಂತ ತಾಣೆ ತಾಚೊ ಈಶ್ಟ್‌ ಲುವಿಸ್‌ ಮಸ್ಕರೇನ್ಹಸ್‌ ಹಾಚ್ಯಾ ಕೊಂಕ್ಣಿ ದಿರ್ವೆಂ ಪತ್ರಾಕ್‌ ಪಾಟಿಂಬೊ ದಿಲೊ ಆನಿ ಹಾಕಾ ಲಾಗೊನ್‌ ಕೊಂಕ್ಣಿ ಪತ್ರಿಕೋಧ್ಯಮಾಕ್‌ ಬುನ್ಯಾದ್‌ ಪಡ್ಲಿ.

ಸುರ್ವೆರ್‌, ಸಾಹಿತ್ಯ್‌ ಅಕಾಡೆಮಿಚೊ ವಾಂಗ್ಡಿ ಹೆನ್ರಿ ಎಮ್.‌ ಮಸ್ಕಾರೆನ್ಹಾಸಾನ್ ಸಾಹಿತ್ಯ್ ಅಕಾದೆಮಿಚ್ಯಾ ಕಾರ್ಯ್‌ವಿದಾನಾಚೆರ್ ಉಜ್ವಾಡ್ ಘಾಲೊ ಆನಿ ಕಾರ್ಯಾಚ್ಯಾ ನಿಮಾಣೆ ಧನ್ಯವಾದ್‌ ಪಾಟಯ್ಲೆ. ಸಾಹಿತ್ಯ ಅಕಾಡೆಮಿಚ್ಯಾ ಕೊಂಕಣಿ ಸಲಹಾ ಸಮಿತಿಚೊ ನಿಮಂತ್ರಕ್ ತಶೆಂ ಕಾರ್ಯಕಾರಿ ಮಂಡಳಾಚೊ ಸಾಂದೊ ಮೆಲ್ವಿನ್ ರೊಡ್ರಿಗಸಾನ್ ಸರ್ವಯ್ ಕಲಾಕರಾಂಕ್ ಫುಲಾಂ ತುರೆ ದೀವ್ನ್‌ ಸ್ವಾಗತ್‌ ಕೆಲೊ. ನಿಮಾಣೆ ಸರ್ದಾರ್ ಲುವಿಸ್ ಕಣ್ಣಪ್ಪಾಚೆಂ ಪಿಂತುರ್ ಸಾಂ ಲುವಿಸ್‌ ಕೊಲೆಜಿಚ್ಯಾ ಕೊಂಕಣಿ ಸಂಸ್ಥ್ಯಾಚೊ ದಿರೆಕ್ತೊರ್‌ ದೊ| ಫಾ| ಮೆಲ್ವಿನ್‌ ಪಿಂಟೊಕ್‌ ಹತಾಂತರ್‌ ಕೆಲೆಂ.

ಕಾರ್ಯಾವೆಳಾರ್‌ ಸಾಹಿತ್ಯ್‌ ಅಕಾಡೆಮಿಚೊ ವಾಂಗ್ಡಿ  ಸ್ಟೇನಿ ಬೇಳಾ, ಕೊಂಕಣಿ ಸಂಸ್ಥ್ಯಾಚೊ ದಿರೆಕ್ತೊರ್‌ ದೊ| ಫಾ| ಮೆಲ್ವಿನ್‌ ಪಿಂಟೊ,  ದಾನಿ ಮಾನೆಸ್ತ್‌ ವಿಲಿಯಮ್‌ ಡಿʼಸೋಜಾ, ಕಾನಡಿ ಭಾಶೆಚಿ ಲೇಖಕಿ ಬಿ.ಎಮ್.‌ ರೋಹಿಣಿ, ಕೊಂಕಣಿ ಭಾಶಾ ಮಂಡಳ್‌, ಕರ್ನಾಟಕ್‌ ಹಾಚೊ ಅಧ್ಯಕ್ಷ್‌ ಶ್ರೀ ವಸಂತ್‌ ರಾವ್‌, ಕವಿ , ಸಾಹಿತಿ, ಲುವಿಸ್‌ ಕಣ್ಣಪ್ಪಾಚ್ಯಾ ಕುಟ್ಮಾಚೆ ಸಾಂದೆ, ತಶೆಂ ಸಾಂ ಲುವಿಸ್‌ ಕೊಲೆಜಿಚೆ ಕೊಂಕಣಿ ವಿದ್ಯಾರ್ಥಿ, ವಿದ್ಯಾರ್ಥಿಂನಿ ಹಾಜರ್‌ ಆಸ್‌ʼಲ್ಲಿಂ.

Leave a Comment

Your email address will not be published.

You may also like

Latest Posts

post-image
Reviews

ಸಾಹಿತ್ಯ್ ಆನಿ ವಿಮರ್ಸೊ – ಏಕ್ ನದರ್

ಕಾಂಯ್ ಥೊಡ್ಯಾ ಮಹಿನ್ಯಾಂ ಆದಿಂ ವಾಟ್ಸಾಪಾರ್ ಆಯಿಲ್ಲ್ಯಾ ಎಕಾ ಹಾಸ್ಯ್ ಸಂದೇಶಾಚೊ ಉಲ್ಲೇಕ್ ಕರ್ಚ್ಯಾ ಸವೆಂ ಹೆಂ ಲೇಕನ್ ಆರಂಬ್ ಕರ್ತಾಂ. ವಾಟ್ಸಾಪಾರ್ ಏಕ್ ಸಂದೇಶ್...
Read More